"ಸ್ನೇಹಿತನಾಗಿದ್ದರೆ ನಿನಗೆ ಪುಸ್ತಕ, ಮೌಡ್ಯಜಾಡ್ಯಗಳಿಂದೂರಾಗಿ,
ವಿಕಸನದಿಂದ್ಪುಲಕಿತಗೊಳ್ಳುವುದು ನಿನ್ನ ಮಸ್ತಕ"
2. "ಆಶಯ- ಸಮಯ"
·
"ಇದ್ದರೆ ಪ್ರೀತಿಯುಕ್ತ ಪ್ರಾಮಾಣಿಕವಾದ ಆಶಯ,
ಎಲ್ಲದಕ್ಕೂ ನಿಮಗೊದಗುವುದು ಸಮಯ"
3. "ನಿನ್ನ ದೇಹಕೆ ನೀನೇ ಸೈನಿಕ"
"ನಿನ್ನ ದೇಹಕೆ ದಂಡಿಸಿದರೆ ದೈನಿಕ, ನೀನೆ ಆಗುವೆ ನಿನ್ನ ದೇಹಕೆ ಸೈನಿಕ"
ನಿನ್ನ ದೇಹವ ದಂಡಿಸು, ನಿನ್ನಲೇ ಇರುವ ಆರೋಗ್ಯ ಸಂಪತ್ತನ್ನು ಅನುಭವಿಸು
4. "ಪರಿಪೂರ್ಣತೆ – ಪ್ರೌಢ್ಯತೆ"
"ಪರಿಪೂರ್ಣತೆ ನಮ್ಮಲ್ಲಡಗಿದ್ದರೆ ಪರಿಪಕ್ವವಾಗುತಾ ಸಾಗುವುದು ನಮ್ಮ ಪ್ರೌಢ್ಯತೆ"
5. "ಫ್ರೌಡ್ಯ- ಮೌಡ್ಯ"
"ಫ್ರೌಡ್ಯ ಗಳಿಸಿ, ಮೌಡ್ಯ ಅಳಿಸಿ, ಪ್ರೀತಿ ಬೆಳಸಿ"
6. "ಕಳೆ-ಬೆಳೆ : ಸಿಹಿ-ಕಹಿ"
"ಕಳೆಯಿಲ್ಲದೆ ಬೆಳೆಯಿಲ್ಲ,
ಸಮಯೋಚಿತವಾಗಿ ಬೆಳಯನು ಕಳೆರಹಿತವಾಗಿಸದಿದ್ದರೆ ಬೆಳೆಗೆ ಬೆಲೆಯಿಲ್ಲ.
ಹಾಗೆಯೇ ನಮ್ಮೆಲ್ಲರ ಮನದಿ ಬರುವ ಕಹಿಯೆಂಬ ಕಳೆಯನು ಕಳೆದು
ಪ್ರೀತಿಯೆಂಬ ಬೆಳೆಯ ಬೆಳದು ಸಿಹಿಯಾಗಿಸಿದರೆ ಯಾವ ಸಿಹಿಯು ಅಳಿಯದು, ಯಾವ ಕಹಿಯು ಸುಳಿಯದು"
7. “ದುಡಿ-ಮಿಡಿ-ಹಿಡಿ”
"ತುಡಿಯಬೇಡ..., ದುಡಿ, ಮಿಡಿ, ಹಿಡಿ, ನಿನ್ನ ಜೀವದಿಂದ ಒಳಿತಾದ ಮೇಲೆ ಮಡಿ, ಈ ಇಹಲೋಕದ ಸೊಬಗ ಕಾಣದೆ ವಿಚಲಿತರಾದವರಿಗೆ ನಿನ್ನ ಅಮೂಲ್ಯವಾದ ನೇತ್ರಗಳನು ದಾನಗೈದು ಮಡಿದ ನಂತರವೂ ಮಿಡಿ"
8. “ಮುಂಬೈ”
"ಶ್ರೀಸಾಮಾನ್ಯನನ್ನು ಅಸಾಮಾನ್ಯನನ್ನಾಗಿಸುವ ಶಕ್ತಿಯುಕ್ತವಾಗಿರುವುದು ಮುಂಬೈ
ಇಂತಹ ಘಾತಕ ಪಾತಕ ಕೃತ್ಯಗಳನ್ನು ತೃಣವೆಂದೆಣಿಸಿ ಮುನ್ನೆಡೆಸುವುದು ಮುಂಬೈ"
9. "ಭಯೋದ್ಪಾದಕ”
"ಭಯೋದ್ಪಾದಕ ನಿರ್ಭಯವಾಗಿ ಎಸಗುತಿರುವನು ಘಾತಕ ಪಾತಕ ....
ತೀರ್ಪನ್ನು ನೀಡದ ಆಮೆಗಿಂತ ಲಘುವಾಗಿರುವ ಉಚ್ಚ ನ್ಯಾಯಾಲಯದಿಂದ ಶ್ರೀಸಾಮಾನ್ಯನಾಗಿರುವನು ನಿಸ್ಸಹಾಯಕ"
10. “ಆವನಿ”
"ಪ್ರಕೃತಿಗೆ ಎಸಗಿದರೆ ಹಾನಿ, ಆವನಿ ಕೆಲನಿಮಿಷ ನಡುಗಿ ನಿಮ್ಮ ಸರ್ವಸ್ವಕ್ಕೆ ತರುವಳು ಹಾನಿ"
11. “ನಾಡಗೌಡ ಕೆಂಪೇಗೌಡ”
"ಶರಣು ನಿಮಗೆ ...ನಾಡಗೌಡ ಕೆಂಪೇಗೌಡ ..
ನೀ ಕಟ್ಟಿದೆ ಬೆಂದಕಾಳೂರೆಂಬ ಹಸಿರಿನ ಬೀಡ ....
ಹಸಿರು ಅಳಿಯುತ, ತಾಪವೇರುತ..ಅನಿಸಿದೆ ಅಬ್ಬ ಈ ಊರು ಬೇಡವೇಬೇಡ"
12. “ವಿವಾಹ”
“ವಿವಾಹವೆಂಬುದು ನಿಶ್ಚಯವಾಗುವುದು ಸುರಲೋಕದಲ್ಲಿ
ಆದಮೇಲೆ ನೀ ಪಾವತಿಸುತ್ತಿರಲೇ ಬೇಕು ಅದರ ಸಂರಕ್ಷಣಾ ಶುಲ್ಕ ಇಹಲೋಕದಲ್ಲಿ
ಗಡುವಿನೊಳಗೆ ಪಾವಿತಿಸಿದರೆ ಸುರಲೋಕವೇ ಇಹಲೋಕದಲ್ಲಿ"
13. “ಹೊನ್ನು, ಹೆಣ್ಣು, ಮಣ್ಣು”
“ಹೊನ್ನು, ಹೆಣ್ಣು, ಮಣ್ಣು ಒಲಿವುದು ಅಷ್ಟು ಸುಲಭವಲ್ಲ
ಹೊನ್ನು ಒಲಿದಾದ ನಂತರ, ಒಲಿಯದ ಹೆಣ್ಣಿನತ್ತ ತುಡಿದರೆ, ಒಲಿದ ಹೊನ್ನೆಲ್ಲ ಮಣ್ಣು
ಹೆಣ್ಣು ಒಲಿದಾದ ನಂತರ, ಒಲಿದ ಹೊನ್ನ ನಿರ್ಲಕ್ಷಿಸಿದರೆ, ಒಲಿದ ಹೊನ್ನೆಲ್ಲ ಮಣ್ಣು
ಮಣ್ಣು ಒಲಿದಾದ ನಂತರ, ಒಲಿದ ಹೆಣ್ಣ ತೊರೆದರೆ, ಕಾಣೆಯಾಗುವುದು ಸಂಸಾರದ ಕಣ್ಣು
ಒಲಿದ ಹೊನ್ನು, ಹೆಣ್ಣು, ಮಣ್ಣು ಎಲ್ಲಾ ನಿಷ್ಫಲವಾದಾಗ , ಜೀವನವೆಲ್ಲ ಹುಣ್ಣು
ಇದನರಿತು ಬಾಳಿದರೆ ಮನುಜ ನಿನ್ನ ಜೀವನದಲ್ಲಿ ಸವಿಯುವೆ ಸಿಹಿಯಾದ ಹಣ್ಣು"
15. “ನಂಬಿಕೆ- ಜಾರಿಕೆ”
"ಕ್ಷೀಣವಾದರೆ ನಂಬಿಕೆ, ಸಂಬಂಧದಲಿ ಕಾಣುವಿರಿ ಜಾರಿಕೆ !!!!"
16. “ಭಯ-ಮಾಯ-ವಿನಯ-ಗಾಯ-ಜಯ”
"ಭಯ ಆದರೆ ಮಾಯ ನಿನ್ನ ನಯ ವಿನಯದ ವ್ಯಕ್ತಿತ್ವಕಾಗುವುದು ಗಾಯ... ಶೀಘ್ರದಲಿ ಎಚ್ಚರವಾಗದಿದ್ದರೆ, ನಿನ್ನುದರದಲಿ ದುರಹಂಕಾರದ ಜಯಕರವೇ ತರುವಾಯ..."
17. “ತಾಯಿಯೇ ದೈವ”
“ಕಾಣದ ದೈವಕೆ, ಆಡದ ಕಲ್ಲಿಗೆ ಬಾಗಿ ಹುಡುಕುವಿರಲ್ಲೋ ಹುಚ್ಚಪ್ಪಗಳಿರ
ಸರಿಸಾಟಿ ಇಲ್ಲದ ಮಮತೆಯೊಳಗೊಂಡ ಪ್ರತ್ಯಕ್ಷ ದೈವ ತಾಯಿಯ ಕಾಣಲಾರಿರ "
18. “ಹಿತ- ಸ್ನೇಹಿತ”
"ಹಿತವಿಲ್ಲದೆ ಸ್ನೇಹಿತವೆಲ್ಲಿ ... ಸ್ನೇ ಹಿತ ..ಸ್ನೇಹಿತ"
ಸ್ನೇ ಹಿತ ..ಸ್ನೇಹಿತ ಯಾವ ಸಂಧಿ ನನ್ನ ಸ್ನೇಹಿತರೋರ್ವರು ಕೇಳಿದಾಗ ....
"ಇಲ್ಲಿ ಯಾವ ಸಂಧಿಯೂ ಇಲ್ಲ , ಲೋಪದ ತಾಪವೂ ಇಲ್ಲ .... ವ್ಯಾಕರಣದ ನಿಭಂದನೆಗಳಿಗೆ ಒಳಪಟ್ಟಿಲ್ಲ.. ಕವಿಯ ಮನದಾಳದ ರಿಂಗಣದಿಂ ಜಾರಿದ ಹನಿಗಳೇ ಎಲ್ಲ :)
19. “ಇತಿಹಾಸ - ಉಲ್ಲಾಸ”
"ಪುನರಾವರ್ತಿಸಿದರೆ ನಿರುತ್ಸಾಹದ ಇತಿಹಾಸ, ಕುಂದಿಸುವುದು ಮಂದಹಾಸ ತುಂಬಿರುವ ಇಂದಿನ ಮುಂದಿನ ಉಲ್ಲಾಸ"
20. “ಬೆಂಬಲ”
"ಬೆಂಬಲದ ಹಂಬಲ ನಿನಗೇಕೆ, ನಿನ್ನಲ್ಲಡಗಿರುವ ಆತ್ಮಶಕ್ತಿಯಿಂದಿರುವ ಆನೆಬಲ ಸಾಲದೇಕೆ...?"
"ಜೀವನದ ಗುರಿಸಾಧನೆಗಾಗಿ ನೀನಿಡುವ ಪ್ರಾಮಾಣಿಕ ಹೆಜ್ಜೆಗೇಕೆ ಭಯ, ನುಗ್ಗು ಮುನ್ನುಗು ನಿನಗೊದಗುವುದು ಖಂಡಿತ ಜಯ"
21. “ಮಂಗಲ್ ಪಾಂಡೆ”
"ಮಂಗಲ್ ಪಾಂಡೆ ... ನೀ ಸ್ವಾತಂತ್ರದ ಸಂಗ್ರಾಮಕೆ ಕ್ರಾಂತಿ ತಂದೆ
ಬ್ರಿಟೀಷರ ನೀಚ ಕೃತ್ಯಗಳ ಕಂಡೆ ,
ಅವರಿಗೆದುರು ಬಿದ್ದು ನೀ ನೋವನುಂಡೆ,
ಭಾರತಮಾತೆಯ ಸ್ವಾತಂತ್ರ ಸಂಗ್ರಮಕೆ ನಿನ್ನ ಜೀವವ ಕಳೆದು ಕೊಂಡೆ
ಎಷ್ಟೋ ಎಷ್ಟೋ ನೊಂದ ಭಾರತೀಯರು ನಿನ್ನ ಬಲಿದಾನಕೆ, ಅವರಟ್ಟಹಾಸಕೆ ಎದುರಾಗಲು ಕಳೆದು ಕೊಂಡರು ತಮ್ಮ ಮಂಡೆ,
ಎಲ್ಲರಿಗನಿಸಿತು ನಾವೆಲ್ಲರೂ ಒಂದೇ ಒಂದೇ ...ನಾವಿನ್ನಿಡುವುದಿಲ್ಲ ಹೆಜ್ಜೆಯ ಹಿಂದೆ ...ಮುನ್ನುಗುವೆವು ಮುಂದೆ ...
ಅಖಂಡ ಭಾರತ ಸ್ವಾತಂತ್ರ ಸಂಗ್ರಾಮಕೆ ನಾಂದಿ ನೀನಾದೆ
ಮಂಗಲ್ ಪಾಂಡೆ ... ನೀ ಸ್ವಾತಂತ್ರದ ಸಂಗ್ರಾಮಕೆ ಕ್ರಾಂತಿ ತಂದೆ …. ಮಲ್ನಾಡ್ಗಿರಿ
22. “ಬನ್ನಿಯ ಸಿಹಿ ನುಡಿ”
"ಬನ್ನಿ, ಬಂಗಾರದಂತಹ "ಬನ್ನಿ"ಯ ತರುವ ಬನ್ನಿ,
ಎಲ್ಲಾ ಅವತಾರಗಳ ದೈವಗಳಿಗೆ ಹಾಗು ಸಕಲ ಚರಾಚರಗಳ ತಾಯಿ ಅಂಬೆಗೆ "ಬನ್ನಿ"ಯ ಮುಡಿಸುವ ಬನ್ನಿ
ತಾಯಿತಂದೆಗೆ, ಹಿರಿಯರಿಗೆ "ಬನ್ನಿ" ಕೊಡುವ ಬನ್ನಿ, ಅವರಿಂದ ಬೆಲೆಕಟ್ಟಲಾಗದಂತಹ ಆಶೀರ್ವಾದವ ಪಡೆಯುವ ಬನ್ನಿ,
ನಮ್ಮೆಲ್ಲರ ಹಿತ ಬಯಸುವ ಬಂಧು ಸ್ನೇಹಿತರೊಂದಿಗೆ "ಬನ್ನಿ"ಯ ವಿನಿಮಯಸುವ ಬನ್ನಿ, ಕಲ್ಮಶವ ಅಳಿಸಿ, ಅಪರಿಮಿತ ಪ್ರೀತಿವಿಶ್ವಾಸವ ಬೆಳಸುವ ಬನ್ನಿ,
ನಮ್ಮೆಲ್ಲರ ಸಲಹುತಿಹ ಕರುನಾಡಿನ ಮುಕುಟ ಮೈಸೂರಿನ ಚಾಮುಂಡಿಗೆ, ಭಾರತಾಂಬೆ ನಮಿಸುವ ಬನ್ನಿ
ಬನ್ನಿ, ಬಂಗಾರದಂತಹ "ಬನ್ನಿ"ಯ ತರುವ ಬನ್ನಿ
ಈ ದಸರಾ ಅಳಿಸಲಿ ನಮ್ಮೆಲ್ಲರಲ್ಲಿರುವ ಕೇಡಿನ ಪಿಸುರ, ಎಲ್ಲೆಡೆ ಚಿಗುರಿಸಲಿ ಪ್ರೀತಿಸಂತಸದ ಹಸಿರ"
23. “ಶ್ರಾವಣ ನೀ ಸುರಿಸು ಮಳೆಯ ಜಣಜಣ”
"ಶ್ರಾವಣ ನೀ ಸುರಿಸು ಮಳೆಯ ಜಣಜಣ ..
ವರುಣನ ಕಾಣದೆ ಕಂದಾಗುತಿಹುದು ಕಾನನ,
ಭುವಿಯಾಗುತಿಹುದು ವಣವಣ,
ಕತ್ತಲೆಯ ಕಣಕಣದಲಿ ಮುಳುಗುತಿಹುದು ಎಲ್ಲರ ಮನ,
ಶ್ರಾವಣ ನೀ ಸುರಿಸು ಮಳೆಯ ಜಣಜಣ
ಮಳೆಯ ಸುರಿಸಿ, ಬೆಳಯ ಬೆಳಸಿ, ಬೆಳಕ ಪಸರಿಸಿ
ನಮ್ಮೆಲ್ಲರ ಗೂಡಿಗೆ ತೊಡಿಸು ಹಸಿರು ತೋರಣ ... ಹೇಯ್ ಶ್ರಾವಣ ….
ಶ್ರಾವಣ ನೀ ಸುರಿಸು ಮಳೆಯ ಜಣಜಣ"
24. “ಶರಣು ನಿನಗೆ ಶ್ರಾವಣ”
"ಶರಣು ನಿನಗೆ ಶ್ರಾವಣ.. ಆಲಿಸಿದೆ ನೀ ನಮ್ಮೆಲ್ಲರ ಪ್ರಾರ್ಥನೆಯ ಆಕ್ರಂದನ
ನೀ ನೀಡಿದೆ ವರುಣನಿಗೆ ಅತ್ಯುಚ್ಚವಾದ ಔತಣ
ನಿನ್ನೌತಣಕೆ ವರುಣನ ಮನ ಖುಷಿಯಿಂದ ಉಲ್ಬಣ
ನನ್ನಗೂಡು ಮಲೆನಾಡಿನಲಿ ವರುಣನು ಕುಣಿಯುತಿಹನು ಥಣಥಣ
ಜಲಾಶಯಗಳನು ಆವೃತದ ಗಡುವಿನೆಡೆಗೆ ಸಂಧಿಸಿದ್ದಕ್ಕಾಗಿ ಋಣಿಗಳಾದೆವು ನಾವು ಈ ಕ್ಷಣ
ಹೇಯ್ಶ್ರಾವಣ, ವರುಣನಆರ್ಭಟನೆಯಥಣಥಣ …ಗಡುವ ಮೀರಿ ತಂದೀತು ಅತಿವೃಷ್ಟಿಯ ತಲ್ಲಣ ..
ಸಂಧಿಸಿದರೆ ಅತಿವೃಷ್ಟಿಯ ತಲ್ಲಣ, ಶ್ರಾವಣ..., ವರುಣನ ಆರ್ಭಟನೆಗೆ ನೀತೊಡಿಸು ಶಾಂತಿಯ ಕಡಿವಾಣ ....
ಶರಣು ನಿನಗೆ ಶ್ರಾವಣ … ಆಲಿಸಿದೆ ನೀ ನಮ್ಮೆಲ್ಲರ ಪ್ರಾರ್ಥನೆಯ ಆಕ್ರಂದನ"
25. “ಸಿರಿಗನ್ನಡ”
"ಸಿರಿಗನ್ನಡ, ಸಿರಿಗನ್ನಡವೆಂದು ನೀ ಪ್ರತಿನಿತ್ಯವೂ ಹಾಡ
ಸಿರಿಗನ್ನಡದ ಸಿರಿಗೆ ದುಡಿದ ಮಹಾನುಭಾವರ ಇತಿಹಾಸವ ನೋಡ
ಸಿರಿಗನ್ನಡದ ಸಿರಿಯ ಮಲಿನಗೊಳಿಸುವವರಿಗೆ ಸರಿಗನ್ನಡವ ತೋರ
ಸಿರಿಗನ್ನಡದ ಹಿರಿಮೆಯ ಹೊಳೆಯ ಹರಿಸುವ ಬಾರಾ
ಸಿರಿಗನ್ನಡದ ಸಿರಿಯ ಕಿರೀಟಕೆ ಧೂಳೆಸಗುವವರ ಕಿತ್ತೊಗೆಯುವ ಬಾರಾ
ಸಿರಿಗನ್ನಡದ ನುಡಿಮುತ್ತುಗಳು ನಮ್ಮೆಲ್ಲರ ಕಣಕಣದಲಿ, ನರನಾಡಿಗಳಲಿ ಮಿಂದು ಹಿಗ್ಗುತಲಿರಲೆಂದು ಕನ್ನಡಾಂಬೆಗೆ ನಮಿಸುವ ಬಾರಾ
ಸಿರಿಗನ್ನಡದ ನುಡಿಗೆ ದುಡಿದು, ಮಡಿದ ನಂತರವೂ ಮಿಡಿಯುವ ಬಾರಾ
ಸಿರಿಗನ್ನಡ, ಸಿರಿಗನ್ನಡವೆಂದು ನೀ ಪ್ರತಿನಿತ್ಯವೂ ಹಾಡ"
26. “ಕಲ್ಮಶ-ಅಂಕುಶ-ಕಲಶ”
"ಹಿರಿಯರು, ಪ್ರಜ್ಞಾವಂತರು ಹೇಳುತ್ತಾರೆ, ಮಕ್ಕಳು ದೇವರ ಸಮಾನ ...
ಸತ್ಯ!!!! ಮಕ್ಕಳ ತನುಮನದೊಳಿರುವುದಿಲ್ಲ ಕಲ್ಮಶ ..
ಅವರಲ್ಲಡಗಿಹ ದಿವ್ಯಶಕ್ತಿ, ಪ್ರತಿಭೆಗಳಿಗಾಗದಿರಿ ಅಂಕುಶ ...
ಪ್ರೋತ್ಸಾಹಿಸಿ, ಪೋಷಿಸಿದರೆ ಖಚಿತವಾಗಿ ಆಗುವರು ನಮ್ದೇಶಕೆ ಕಲಶ ....."
ಅವರಲ್ಲಡಗಿಹ ದಿವ್ಯಶಕ್ತಿ, ಪ್ರತಿಭೆಗಳಿಗಾಗದಿರಿ ಅಂಕುಶ ...
ಪ್ರೋತ್ಸಾಹಿಸಿ, ಪೋಷಿಸಿದರೆ ಖಚಿತವಾಗಿ ಆಗುವರು ನಮ್ದೇಶಕೆ ಕಲಶ ....."
27. “ಮನೋರಮೆ-ಕ್ಷಮೆ-ವಿಮೆ”
"ಮನೋರಮೆ, ಇದ್ದರೆ ನಮ್ಮೊಡಲಲಿ ಕ್ಷಮೆ, ನಮ್ಪ್ರೀತಿಗೆ ಬೇಕಿಲ್ಲ ಯಾವುದೇ ವಿಮೆ"
"ಮನೋರಮೆ, ಇದ್ದರೆ ನಮ್ಮೊಡಲಲಿ ಕ್ಷಮೆ, ನಮ್ಪ್ರೀತಿಗೆ ಬೇಕಿಲ್ಲ ಯಾವುದೇ ವಿಮೆ"
…ಮಲ್ನಾಡ್ಗಿರಿ
Tumba chennagide nimma yochana lahari
ReplyDeleteTumba dhanyavaadagalu
Delete